ಸ್ಪಂದನ 20 ವರ್ಷದ ಸಂಭ್ರಮಕ್ಕೆ ಏನಾದರೂ ವಿಶೇಷವಾಗಿ ಮಾಡಬೇಕು ಎಂದುಕೊಂಡಾಗ ಮೊದಲು ನೆನಪಾಗಿದ್ದು ಸರ್ಕಾರಿ ಶಾಲೆಗಳ ಮಕ್ಕಳು ಅವರಿಗಾಗಿ ಸಾಗರ ತಾಲ್ಲೂಕಿನ ಆಯ್ದ ಕೆಲವು ಶಾಲೆಗಳಲ್ಲಿ ಪರಿಚಯಾತ್ಮಕ ರಂಗಶಿಬಿರವನ್ನು ನಮ್ಮ ಮಿತಿಯಲ್ಲಿ ನಡೆಸುತ್ತಾ ಬಂದಿದ್ದೇವೆ ಈಗಾಗಲೆ ಕಳೆದ ಸಾಲಿನಲ್ಲಿ ಆರು ಶಾಲೆಗಳಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ನಡೆಸಿ ಇದೀಗ ಈ ವಾರ್ಷಿಕ ಅವಧಿಯಲ್ಲಿಯೂ ಮುಂದುವರೆಸುತ್ತಿದ್ದೇವೆ.

ಈ ಯೋಜನೆಗೆ ಯಾವುದೇ ಅನುದಾನ ಪ್ರಾಯೋಜಕತ್ವವನ್ನು ತೆಗೆದುಕೊಂಡಿರುವುದಿಲ್ಲ ..ಆದಾಗ್ಯೂ ನಮ್ಮ ಕೆಲಸವನ್ನು ನೋಡಿ ಕೆಲವು ಸ್ನೇಹಿತರು ಪ್ರಿತಿಯಿಂದ ಧನಸಹಾಯ ನೀಡಿರುತ್ತಾರೆ . ಬೆಂಗಳೂರಿನ Axen ಕಂಪನಿಯ ಮಾಲೀಕರಾದ ಆನಂದ್ ರವರು ಈ ಯೋಜನೆಯ ಮಕ್ಕಳಿಗೆ ನೀಡಲು 200 ಛತ್ರಿಗಳನ್ನು ನೀಡಿರುತ್ತಾರೆ. ಇದೀಗ ಶಿರಸಿಯ ಎರಡು NGO ಗಳು

ಗ್ರೀನ್ ಕೇರ್ ಸಂಸ್ಥೆ : ಉಚಿತ ಆರೋಗ್ಯ ಮಾಹಿತಿ, ತಪಾಸಣೆ ಹಾಗು ಪ್ರಥಮ ಚಿಕಿತ್ಸಾ ಪೆಟ್ಟಿಗೆ ವಿತರಣೆ
ಸಂಕಲ್ಪ ಅಭಿವೃದ್ಧಿ ಟ್ರಸ್ಟ್ : ಶಾಲೆಗಳಿಗೆ ಅಗತ್ಯವಿರುವ ಸಸಿಗಳನ್ನು ತರಕಾರಿ ಬೀಜ ಇತ್ಯಾದಿ ನೀಡುತ್ತಿದೆ.
ಅದೇ ಊರಿನವರಾದ ಪರ್ತಕರ್ತ ಮಿತ್ರ ಹರ್ಷ ಮತ್ತು ಭಾಗ್ಯ ಮರವಾಸಿ ಐದು ಆರು ಏಳನೇ ತರಗತಿ ಮಕ್ಕಳಿಗೆ ಡಿಕ್ಷನರಿ ನೀಡುತ್ತಿದ್ದಾರೆ.

ಸ್ಪಂದನದ ಆಸಕ್ತಿ ವಿಧ್ಯಾರ್ಥಿಗಳು ಜೊತೆಯಾಗಿರುತ್ತಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಮತಿ ಶಾಲೆಯ ಹಾಗು ಶಾಲಾಭಿವೃದ್ದಿ ಸಮಿತಿಗಳ ಬೆಂಬಲದಿಂದ ನಾವು ಮತ್ತಸ್ಟು ಮುಂದುವರೆಸುವ ಉತ್ಸಾಹದಲ್ಲಿದ್ದೇವೆ.
ನಿಮ್ಮ ಹಾರೈಕೆಗಳು ಜೊತೆಗಿರಲಿ. ಈ ಶಾಲೆಯಲ್ಲಿ ಈ ಯೋಜನೆ ಜಾರಿತರಿಸಲು ಸಹಕಾರಿಯಾದ ಹರ್ಷ ಕುಗ್ವೆಗೆ ಧನ್ಯವಾದ